ಬತ್ತ
	ಜನಪ್ರಿಯ ಆಹಾರಧಾನ್ಯಗಳ ಪೈಕಿ ಒಂದು (ಪ್ಯಾಡಿ, ರೈಸ್). ಪೋಯೇಸೀ ಕುಟುಂಬಕ್ಕೆ ಸೇರಿದೆ. ಒರೈಜ ಸೇಟಿವ ಇದರ ವೈಜ್ಞಾನಿಕ ಹೆಸರು. ಇದು ಅತಿ ಪುರಾತನ ಕಾಲದಿಂದಲೂ ಬೇಸಾಯದಲ್ಲಿರುವ ಆಹಾರ ಧಾನ್ಯ ಬೆಳೆಗಳ ಪೈಕಿ ಒಂದು. ಚೀನ, ಜಾವ, ಭಾರತ ಮತ್ತು ಪೂರ್ವ ಆಫ್ರಿಕ ದೇಶಗಳಲ್ಲಿ ಪ್ರಾಚೀನಕಾಲದಿಂದಲೂ ಬೆಳೆಯುತ್ತಿದ್ದುದು ಕಂಡುಬರುತ್ತದೆ. ಗುಜರಾತದ ಲೋಥಾಲದಲ್ಲಿ ದೊರೆತ ಅವಶೇಷಗಳಿಂದ ಬತ್ತ ಕ್ರಿಪೂ 2300ರಲ್ಲಿ ಸಾಗುವಳಿಯಲ್ಲಿ ಇದ್ದುದು ತಿಳಿದುಬರುತ್ತದೆ. ಭಾರತವೇ ಬತ್ತದ ತವರು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಜಪಾನ್, ದಕ್ಷಿಣಕೊರಿಯ, ಉತ್ತರಚೀನ, ನ್ಯೂಸೌತ್ ವೇಲ್ಸ್, ಇಟಲಿ, ಸ್ಪೇನ್, ಫ್ರಾನ್ಸ್, ಪೋರ್ಚುಗಲ್, ಕ್ಯಾಲಿಫೋರ್ನಿಯ ಮತ್ತು ದಕ್ಷಿಣ ಅಮೆರಿಕದಲ್ಲಿ 30o ಉ ಅಕ್ಷಾಂಶದಾಚೆ ಜಪಾನಿಕ ಜಾತಿಗಳು ಸಾಗುವಳಿಯಲ್ಲಿವೆ. ಇಂಡಿಕ ಜಾತಿಗಳು ವಿಷವದ್ವøತ್ತದಿಂದ 30oದ. ಅಕ್ಷಾಂಶದವರೆಗೆ ಬೆಳೆಯುತ್ತಿರುವುದು ಕಂಡುಬರುತ್ತದೆ. ಆಫ್ರಿಕಾದಲ್ಲಿ ಗ್ಲಾಬೆರಿಯಾ ಜಾತಿಗಳು ಸಾಮಾನ್ಯವಾಗಿ ಸಾಗುವಳಿಯಲ್ಲಿವೆ.

	ಭಾರತದಲ್ಲಿ 5000ಕ್ಕೂ ಹೆಚ್ಚು ಬಗೆಗಳು ಬೇಸಾಯದಲ್ಲಿವೆ. ಪರಿಸರದ ವಿವಿಧ ಸನ್ನಿವೇಶಗಳಿಗೆ ಹೊಂದಿಕೊಂಡು ಬೆಳೆಯಬಲ್ಲ ಬಗೆಗಳೂ ಭಿನ್ನ ಸಮಾಜಗಳ ರುಚಿಗಳಿಗೆ ಅನುಸಾರಗಳಿಗೆ ಬೆಳೆಸಿದ ಇನ್ನೆಷ್ಟೊ ಬಗೆಗಳೂ ಇವೆ. ಇವುಗಳ ಪೈಕಿ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಸುಮಾರು 450 ತಳಿಗಳನ್ನು ಬಲು ವಿಸ್ತಾರವಾದ ಕ್ಷೇತ್ರಗಳಲ್ಲಿ ಬೆಳೆಯಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾದವು : ಒಣu-1, ಒಣu-15, ಮತ್ತು ಊಡಿ-19, (ಆಂಧ್ರಪ್ರದೇಶ); ಚಿನ್ಸುರಾ-7, (ಪಶ್ಚಿಮ ಬಂಗಾಳ); ತೋಳಂಬಾ- (ಮಹಾರಾಷ್ಟ್ರ); ಕ್ರಾಸ್-4 ಮತ್ತು ಕ್ರಾಸ್-18 (ಮಧ್ಯಪ್ರದೇಶ) ಉಇಃ-24, ಅಔ-2, ಅಔ25, ಮತ್ತು ಖಿಏಒ-6(ತಮಿಳುನಾಡು); ಖಿ-141 ಮತ್ತು Sಖ 26-ಃ (ಒರಿಸ್ಸ); ಬಾಸ್ಮತಿ-370 (ಪಂಜಾಬ್); ಖಿ-136-(ಉತ್ತರಪ್ರದೇಶ); ಮುಗದ ಜಾತಿಗಳು S-661, S-317, Pಖಿಃ-10, ಒg-1-(ಕರ್ನಾಟಕ) ಜಾತಿಗಳು.

	ಉಇಃ-24 ಎಂಬ ತಳಿ ಭಾರತದ ಅನೇಕ ರಾಜ್ಯಗಳಲ್ಲಿಯೂ ಪಾಕಿಸ್ತಾನ ಹಾಗೂ ಆಫ್ರಿಕ ದೇಶದ ಕೆಲವು ಪ್ರದೇಶಗಳಲ್ಲಿಯೂ ಬೇಸಾಯದಲ್ಲಿದೆ. ತೆನೆ ಮಾಗುವ ಅವಧಿಯನ್ನು ಗಮನಿಸಿ ಬತ್ತದ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸುವ ಕ್ರಮ ಉಂಟು. ಅತಿ ಮುಂಫಲ 110 ದಿವಸ ಮತ್ತು ಅದಕ್ಕೂ ಮುಂಚಿತವಾಗಿ ಮಾಗುವವು; ಮುಂಫಲ 110-140 ದಿವಸಗಳಲ್ಲಿ ಮಾಗುವವು; ಹಿಂಫಲ 150ರಿಂದ 180 ದಿವಸಗಳಲ್ಲಿ ಮಾಗುವವು ; ಅತಿ ಹಿಂಫಲ 180ಕ್ಕಿಂತ ಹೆಚ್ಚು ದಿವಸಗಳಲ್ಲಿ ಮಾಗುವವು. ಇವುಗಳ ಪೈಕಿ ಮುಂಫಲ ತಳಿಗಳು ಭಾರತದ ದೃಷ್ಟಿಯಿಂದ ಉತ್ತಮವಾದವು ಮಳೆಯನ್ನೇ ಆಶ್ರಯಿಸಿ ಬೆಳೆಯಲು ಇವು ಯೋಗ್ಯವಾಗಿವೆಯಲ್ಲದೆ ನೀರಾವರಿಯ ಆಶ್ರಯದಲ್ಲಿ ಎರಡು ಮೂರು ಬೆಳೆಗಳನ್ನು ತೆಗೆಯಲು ಕೂಡ ಉತ್ತಮವಾಗಿವೆ.

	ಅಸ್ಸಾಮ್, ಪಶ್ಚಿಮ ಬಂಗಾಳ, ಒರಿಸ್ಸ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಬತ್ತ ಬೆಳೆಯುವ ಕ್ಷೇತ್ರಗಳಲ್ಲಿ ಕೆಲವೆಡೆ ಮಳೆಯಿಂದಾಗಿ ಗದ್ದೆಗಳಲ್ಲಿ ನೀರಿನ ಮಟ್ಟ 1-1.5ಮೀ ಎತ್ತರಕ್ಕೆ ಏರುವ ಸಂಭವವುಂಟು. ಇಂಥ ಸಂದರ್ಭಗಳಲ್ಲಿ ತೇಲುವ ಜಾತಿಯ ಬತ್ತವನ್ನು ಬೆಳೆಯುತ್ತಾರೆ. ಕರಾವಳಿಯ ಪ್ರದೇಶಗಳಲ್ಲಿ ಸಮುದ್ರದ ನೀರಿನಿಂದ ಕೆಲಭಾಗಕ್ಕೆ ಉಪ್ಪಡರುವುದುಂಟು. ಇಂಥ ಪ್ರದೇಶಗಳಲ್ಲಿ Sಖ-26-ಃ. ಕಳಾರಾತಾ, ಬುರಾರಾತಾ, ಕರೇಶಗಾ, ಬಿಳೇಕಗ್ಗಾ, ಚಿನ್ಸುರಾ ತಳಿಗಳನ್ನು ಉಪಯೋಗಿಸುತ್ತಾರೆ.

	ಭಾರತೀಯ (ಇಂಡೀ) ಜಾತಿಗಳ ದೇಟು ಸಾಮಾನ್ಯವಾಗಿ ದುರ್ಬಲವಿರುವುದರಿಂದ ಮಾಗುವ ಪೂರ್ವದಲ್ಲಿ ಪೈರು ನೆಲಕ್ಕೊರಗುವ ಸಂಭವ ಹೆಚ್ಚು. ಅತಿ ತಡವಾಗಿ ಮಾಗುವ ಜಾತಿಗಳೂ ಹೇರಳವಾಗಿವೆ. ಮಾಗಿದ ಕಾಳುಗಳು ಉದರುವುದು ಕೆಲವು ಜಾತಿಗಳ ವೈಶಿಷ್ಟ್ಯವಾಗಿದೆ. ಆದ್ದರಿಂದ ಅಲ್ಪ ಕಾಲದಲ್ಲಿ ಮಾಗುವ, ಒರಗದ ಹಾಗೂ ಕಾಳು ಉದುರಿಸದ ಜಾತಿಗಳನ್ನು ತಳೀಕರಣದ ಮೂಲಕ ರೂಪಿಸಲಾಗಿದೆ. ಬೆಂಕಿ ರೋಗ (ಬ್ಲಾಸ್ಟ್) ನಿರೋಧಕ ಜಾತಿಗಳನ್ನೂ ರೂಪಿಸಲಾಗಿದೆ. ಇವುಗಳ ಪೈಕಿ ಅಔ-25 ಅಔ-29, ಅಔ30, ಒ-249 ಗಳು ಮುಖ್ಯ. ಇಂಡೋ ಜಪಾನಿಕ ಮಿಶ್ರ ತಳಿಗಳನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಈಗಾಗಲೇ ಕೃಷಿ ಮಾಡಲಾಗಿದೆ. ಇಳುವರಿಯಲ್ಲಿ ಇವು ದೇಶೀಯ ತಳಿಗಳನ್ನು ಮೀರಿಸಿವೆ. ಅಲ್ಲದೆ ಶ್ರಾಯಗಳ ಬಂಧನಕ್ಕೊಳಗಾಗದೆ ವರ್ಷದ ಯಾವುದೇ ಕಾಲದಲ್ಲಿ ಇವು ಬೆಳೆಯಬಲ್ಲವು. ಇತ್ತೀಚೆಗೆ ಫಿಲಿಫೀನ್ಸ್ ದೇಶದಿಂದ ತೈಚುಂಗ್-65, ತೈನಾನ್-3 ತೈಟುಂಗ್ ನೇಟಿವ್-1 Iಖ-8 ಮುಂತಾದ ಜಾತಿಗಳನ್ನು ತರಿಸಿ ದೇಶದ ವಿವಿಧ ಕಡೆಗಳಲ್ಲಿ ಬೆಳೆದು ಪರೀಕ್ಷಿಸಲಾಗಿದೆ. ಸಾಗುವಳಿ ವಿಧಾನಗಳಲ್ಲಿ ಯುಕ್ತ ಬದಲಾವಣೆ ಮಾಡಿಕೊಂಡು ಹೆಚ್ಚು ಪ್ರಮಾಣದಲ್ಲಿ ಗೊಬ್ಬರ ಉಪಯೋಗಿಸಿ, ಕೀಟ ಹಾಗೂ ರೋಗಗಳಿಂದ ಬೆಳೆಯನ್ನು ರಕ್ಷಿಸಿಕೊಂಡಲ್ಲಿ ಇಳುವರಿಯನ್ನು ಅದ್ಭುತವಾಗಿ ಹೆಚ್ಚಿಸಲು ಸಾಧ್ಯವಿದೆಯೆಂಬುದು ಮನವರಿಕೆಯಾಗಿದೆ.

	ಭಾರತದಲ್ಲಿ ಮಳೆ ಆಶ್ರಯದ ಪ್ರದೇಶಗಳೇ ಅಧಿಕವಿರುವುದರಿಂದ ಮುಂಗಾರು (ನೈಋತ್ಯ ಮಾನ್‍ಸೂನ್) ಮಳೆಯನ್ನೇ ಬತ್ತದ ಒಕ್ಕಲು ಅವಲಂಬಿಸಿದೆ. ಒಟ್ಟು ಪ್ರದೇಶದ ಮೂರರಲ್ಲೊಂದು ಪಾಲು ಕ್ಷೇತ್ರದಲ್ಲಿ ಮಾತ್ರ ನೀರಾವರಿಯ ಸೌಲಭ್ಯವಿದೆ. ಮುಂಗಾರು ಮಳೆ ಬೀಳುವ ಪ್ರದೇಶಗಳಲ್ಲಿ ಬತ್ತವೇ ಮುಖ್ಯಬೆಳೆ. ಅಸ್ಸಾಮ್, ಪಶ್ಚಿಮ ಬಂಗಾಳ, ದಕ್ಷಿಣ ಬಿಹಾರ್ ಹಾಗೂ ಒರಿಸ್ಸಗಳ ಒಟ್ಟು ಕ್ಷೇತ್ರದ 80%ರಷ್ಟು ಕ್ಷೇತ್ರ ಬತ್ತದ ಬೇಸಾಯಕ್ಕೆ ಮೀಸಲಾಗಿದೆ.

	ವರ್ಷದಲ್ಲಿ ಬತ್ತ ಬೆಳೆಯುವ ಮೂರು ನಿರ್ದಿಷ್ಟ ಶ್ರಾಯಗಳುಂಟು ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಕಾಲಗಳು. ಮುಂಗಾರಿನಲ್ಲಿಯೇ ಹೆಚ್ಚಿನ ಪಾಲು ಬೆಳೆಯುತ್ತದೆ. ಜೂನ್-ಜುಲೈ ತಿಂಗಳುಗಳಲ್ಲಿ ಬಿತ್ತಿದ ಪೈರನ್ನು ಸೆಪ್ಟೆಂಬರ್ ಡಿಸೆಂಬರ್‍ಗಳಲ್ಲಿ ಕೊಯ್ಯಲಾಗುತ್ತದೆ. 150ರಿಂದ 180 ದಿವಸಗಳಲ್ಲಿ ಮಾಗುವ ತಳಿಗಳು ಈ ಬೇಸಾಯಕ್ಕೆ ಉತ್ತಮ. ಹಿಂಗಾರಿ ಬೆಳೆಯನ್ನು ಡಿಸೆಂಬರ್-ಜನವರಿ ತಿಂಗಳಲ್ಲಿ ಬಿತ್ತಿ ಮಾರ್ಚ್ ತಿಂಗಳಲ್ಲಿ ಒಕ್ಕುತ್ತಾರೆ. ಅನಂತರ ಬೇಸಿಗೆ ತಿಂಗಳಲ್ಲಿ ಬಿತ್ತಿ ಮಾರ್ಚ್ ತಿಂಗಳಲ್ಲಿ ಒಕ್ಕುತ್ತಾರೆ. ಅನಂತರ ಬೇಸಿಗೆ ಬೆಳೆಯನ್ನು ತೆಗೆದು ಪುನಃ ಮುಂಗಾರು ಬೆಳೆಗೆ ಅನುವು ಮಾಡಿಕೊಳ್ಳುತ್ತಾರೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕೆಲಭಾಗಗಳಲ್ಲಿ ಮೂರು ಬೆಳೆ ಬೆಳೆಯುವ ಅನುಕೂಲಗಳಿವೆ.

	ಜೇಡಿ, ಮಸಾರಿ, ಕೆಂಪು ಹಾಗೂ ಕ್ಷಾರ ಭೂಮಿಗಳಲ್ಲಿ ಬತ್ತ ಬೆಳೆಸಬಹುದು. ಗಂಗಾ ನದಿಯ ಬಯಲಿನಲ್ಲಿ ತೇವೆ ಮಣ್ಣು, ದಕ್ಷಿಣದಲ್ಲಿ ಕೆಂಪು ಹಾಗು ಕಪ್ಪು ಮಣ್ಣು, ಪಂಜಾಬ್, ಉತ್ತರ ಪ್ರದೇಶ, ಬಿಹಾರ್ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಕ್ಷಾರಭೂಮಿ, ಸಮುದ್ರ ದಂಡೆಯ ಪ್ರದೇಶದಲ್ಲಿ ಉಪ್ಪುಮಣ್ಣು ಮೊದಲಾದವುಗಳಲ್ಲಿ ಬತ್ತ ಬೆಳೆಸಲಾಗುತ್ತಿದೆ.

	ಗದ್ದೆಯಲ್ಲಿ ಬಿತ್ತಿದ ಅಥವಾ ನಾಟಿ ಮಾಡಿದಲ್ಲಿಂದ ಕೊಯ್ಲಿನ ತನಕವೂ ನೀರುನಿಲ್ಲುವ ಅವಕಾಶವುಳ್ಳ ಪ್ರದೇಶಗಳು (ಬಾಗಾಯತ್) ಬಹುವಿಶಾಲವಾಗಿವೆ. ಕೇವಲ ಮಳೆಯ ಆಶ್ರಯದಿಂದ ಬೆಳೆಯುವ ಬತ್ತದ ಕ್ಷೇತ್ರ (ಜಿರಾಯತ್) ಅಲ್ಪವಿದ್ದು ಇದು ಒಟ್ಟು ಕ್ಷೇತ್ರದ 10% ಮಾತ್ರ ಇರುವುದು. ಬೀಜವನ್ನು ಚೆಲ್ಲಿ ಅಥವಾ ಕೂರಿಗೆ ಇಲ್ಲವೇ ಕೈಯಿಂದ ಊರಿ ಬಿತ್ತನೆ ಮಾಡಲಾಗುತ್ತದೆ. ಅಸ್ಸಾಮ್, ಕರ್ನಾಟಕ ಹಾಗೂ ಕೇರಳದ ಕೆಲಭಾಗಗಳಲ್ಲಿ ಕಾಡು ಕಡಿದು ಗಿಡ ಸುಟ್ಟು ಭೂಮಿಯನ್ನು ಹಸನುಮಾಡಿ ಬತ್ತ ಬೆಳೆಯುವ ವಾಡಿಕೆಯುಂಟು. ಭೂಸಾರ ಕಡಿಮೆಯಾದಂತೆ ಬೇರೆ ಕಾಡಿಗೆ ಸ್ಥಳಾಂತರಿಸುತ್ತ ನೆಲವನ್ನು ಹೊಸದಾಗಿ ಹಸನುಮಾಡಿ ಬತ್ತದ ಸಾಗುವಳಿಯನ್ನು ಬದಲಿಸುತ್ತ ಹೋಗುವ ಪರಿಪಾಠವಿದೆ. ಇದಕ್ಕೆ 'ಕುಮರಿ' ಅಥವಾ ಪೂನಮ್ ಪದ್ಧತಿ ಎಂದು ಹೇಳುತ್ತಾರೆ.

	ಸಾಮಾನ್ಯವಾಗಿ ಅತ್ಯಧಿಕ ಕ್ಷೇತ್ರ ಬಾಗಾಯತ್. ಇಂಥಲ್ಲಿ ನೀರಿನ ಅನುಕೂಲತೆ ಧಾರಾಳವಾಗಿದೆ. ಈ ಪ್ರದೇಶದಲ್ಲಿ ಸಾಗುವಳಿಯ ಕ್ರಮಗಳು ಇಂತಿವೆ :

	ಬೀಜವನ್ನು ನೇರವಾಗಿ ಬಿತ್ತುವ ಅಥವಾ ಮಡಿಗಳಲ್ಲಿ ಸಸಿಗಳನ್ನು ಬೆಳೆಸಿ ಗದ್ದೆಗಳಲ್ಲಿ ನಾಟಿ ಮಾಡುವ ಪದ್ಧತಿಗಳಿವೆ. ನಾಟಿ ಪದ್ಧತಿಯಿಂದ 25% ರಷ್ಟು ಅಧಿಕ ಫಸಲು ದೊರೆಯುವುದು ಕಂಡು ಬಂದಿದೆ. ಆಳುಗಳ ಅಥವಾ ನೀರಾವರಿಯ ಕೊರತೆ ಇದ್ದಕಡೆ ಬೀಜವನ್ನು ನೇರವಾಗಿ ಬಿತ್ತಲಾಗುತ್ತದೆ. ನಾಟಿ ಪದ್ಧತಿಯ ಬದಲು ಬೀಜವನ್ನು ಬಿತ್ತುವ ಸುಲಭ ಪದ್ಧತಿ ಅನುಸರಿಸಿ ಅಧಿಕ ಫಸಲು ತೆಗೆಯುವ ವಿಧಾನವನ್ನು ಕಂಡು ಹಿಡಿಯುವ ಪ್ರಯತ್ನ ನಡೆದಿದೆ.

	ಸಸಿಗಳನ್ನು ಮಡಿಗಳಲ್ಲಿ ಬೆಳಸಿ ನಾಟಿ ಮಾಡುವುದು ರೂಢಿ. ಗದ್ದೆಯಲ್ಲಿ ನೀರು ಕಟ್ಟಿ ರಂಟೆ ಹೊಡೆದು ಮೊಳಕೆಯೊಡೆದ ಬೀಜವನ್ನು ಅಡ್ಡವಾಗಿ ಚೆಲ್ಲಿ ಸಸಿಗಳನ್ನು ಬೆಳೆಸುವ ಕ್ರಮ ಹೆಚ್ಚು ಪ್ರಚಲಿತ. ಏರುಮಡಿಗಳನ್ನು ಮಾಡಿ ಸಾಲಿನಲ್ಲಿ ಬೀಜಗಳನ್ನೂರಿ ಅಗೆಗಳನ್ನು ಬೆಳೆಸುವುದರಿಂದ ಸದೃಢವಾದ ಸಸಿಗಳು ಬೆಳೆದು ಫಸಲೂ ಹೆಚ್ಚುವುದೆಂಬ ವಿಷಯ ತಿಳಿದು ಬಂದಿದೆ. ಜಪಾನಿ ಪದ್ಧತಿಯಲ್ಲಿ ಏರುಮಡಿ ಹಾಗೂ ಅಗೆಗಳನ್ನು ಸಾಲಿನಲ್ಲಿಯೇ ನೆಡೆಸಬೇಕೆಂಬ ವಿಷಯಕ್ಕೆ ವಿಶೇಷ ಪ್ರಾಶಸ್ತ್ಯ ಕೊಡಲಾಗಿದೆ. ಹೀಗೆ ಮಾಡುವುದರಿಂದ ಕಸೆ ತೆಗೆಯಲು, ಮೇಲ್ಗೊಬ್ಬರ ಹಾಕಲು. ಕೀಟ ಹಾಗೂ ರೋಗಗಳನ್ನು ನಿಯಂತ್ರಿಸಲು ಒಳ್ಳೆಯ ಅವಕಾಶ ಉಂಟಾಗುವುದು. ನಾಟಿ ಮಾಡುವ ಜಮೀನನ್ನು ಹದಕ್ಕೆ ತರುವಾಗ ಅನುಸರಿಸುವ ಕ್ರಮಗಳಿಂದ ಎಷ್ಟೋಪಾಲು ಕಳೆಗಳು ಕೆಸರಿನಲ್ಲಿ ಹೂತುಹೋಗಿ ಗೊಬ್ಬರ ಆಗುವುವು. ಅದರೆ ಕೂರಿಗೆಯಿಂದ ಬಿತ್ತುವ ಜಮೀನುಗಳಲ್ಲಿ ಬತ್ತದ ಜೊತೆಗೆ ಕಳೆಗಳೂ ಹುಟ್ಟುವುದರಿಂದ ಅವುಗಳ ನಿರ್ಮೂಲನೆ ಒಂದು ಸಮಸ್ಯೆಯಾಗಿದೆ. 'ಹೊಡ್ತಾ ಮಾಡುವವರೆಗೆ ಮಣ್ಣಿನಲ್ಲಿಯ ತೇವದಿಂದಲೇ ಬತ್ತ ಬೆಳೆಯಬೇಕಾದ್ದರಿಂದ ಕಳೆಗಳ ಬತ್ತದ ಸಾಲಿನಲ್ಲಿ ಉಳಿಯುವುವು. ಎಡೆಕುಂಟೆ ಹೊಡೆದು ಕೆಲಮಟ್ಟಿಗೆ ಸಾಲುಗಳ ನಡುವೆ ಇರುವ ಕಳೆ ತೆಗೆದರೂ ಅದು ಸಂಪೂರ್ಣ ನಾಶ ಹೊಂದಿರು. ಹೊಡ್ತಾಮಾಡಿದ ಬಳಿಕ ಸತತವಾಗಿ ನೀರು ಕಟ್ಟಿಕಳೆಯನ್ನು ನಾಶಮಾಡಬಹುದು. ಕೂರಿಗೆಯಿಂದ ಬಿತ್ತುವ ಪ್ರದೇಶಗಳಲ್ಲಿ ಬತ್ತವನ್ನೇ ಸಂಪೂರ್ಣವಾಗಿ ಹೋಲುವ ಮಿಶ್ರಜಾತಿಯ ಬತ್ತ ಬೆಳೆಯುತ್ತದೆ. ಅದು ಹೊಡೆಗೆ ಬಂದ ಸ್ಥಿತಿಯಲ್ಲಿಯೇ ಗುರುತಿಸಬಹುದು. ಇದನ್ನು 'ಉಳಕ ಅಥವಾ 'ಗೊಣಗ ಎಂದು ಕರೆಯುತ್ತಾರೆ. ಇದರಲ್ಲಿ ಎಷ್ಟೋ ಅವಗುಣಗಳಿರುವುದರಿಂದ ಉಪಯೋಗಕ್ಕೆ ಅನರ್ಹ. ಇಂಥ ಉಳಕದ ಉಚ್ಚಾಟನೆಗೆ ನೆರವಾಗಲೆಂದು ಮುಗದ ಕೇಂದ್ರದಲ್ಲಿ ಠಿ256 ಎಂಬ 'ಡಾಂಬರ್ ಸಾಳಿ ಅಥವಾ ಜಾಂಬಳಿ ಬಣ್ಣದ ತಳಿಯೊಂದನ್ನು ಬೆಳೆಯಲಾಗಿದೆ. ನಾಲ್ಕಾರು ವರ್ಷಗಳಿಗೊಮ್ಮೆ ಈ ತಳಿಯನ್ನು ಬೆಳೆಯುವುದರಿಂದ ಉಳಕವನ್ನು ಚಿಕ್ಕದಿರುವಾಗಲೇ ಗುರುತಿಸಿ ಸಂಪೂರ್ಣವಾಗಿ ನಾಶಪಡಿಸಬಹುದು. ಉಳಿದ ಕಳೆಯನ್ನು ರಾಸಾಯನಿಕಗಳಿಂದ ನಾಶಪಡಿಸಬಹುದು.

	3360ಕೆಜಿ ಇಳುವರಿ ಕೊಡುವ ಪ್ರತಿ ಹೆಕ್ಟೇರ್ ಕ್ಷೇತ್ರದಲ್ಲಿಯ ಬೆಳೆ 54 ಕೆಜಿ ನೈಟ್ರೊಜನ್, 26 ಕೆಜಿ ಫಾಸ್ಫೇಟ್ ಹಾಗೂ 46 ಕೆಜಿ ಪೊಟ್ಯಾಶನ್ನು ಬಳಸುತ್ತದೆ ಎಂದು ಅಂದಾಜು. ಫಾಸ್ಫೇಟ್ ಹಾಗೂ ಪೊಟ್ಯಾಶ ಗೊಬ್ಬರಗಳನ್ನು ಬಿತ್ತುವ ಕಾಲಕ್ಕೆ ಕೊಟ್ಟು ನೈಟ್ರೋಜನ್ ಗೊಬ್ಬರವನ್ನು ಎರಡು ಅಥವಾ ಮೂರಾವರ್ತಿ (ಬಿತ್ತುವಾಗ ಪಡಲೊಡೆಯುವಾಗ ಹಾಗೂ ತೆನೆಕಟ್ಟುವಾಗ) ಕೊಡುವ ಪರಿಪಾಠವಿದೆ. ನೈಟ್ರೋಜನ್ ಯುಕ್ತ ಗೊಬ್ಬರಗಳಲ್ಲಿ ಅಮೋನಿಯಮ್ ಸಲ್ಫೇಟ್, ಅಮೋನಿಯಮ್ ನೈಟ್ರೇಟ್, ಅಮೋನಿಯಮ್ ಕ್ಲೋರೈಡ್ ಹಾಗೂ ಯೂರಿಯಗಳು ಮುಖ್ಯವಾದವು. ಸೂಪರ್‍ಫಾಸ್ಫೇಟ್, ಯೂರಿಯ ಹಾಗೂ ಮೂಳೆಪುಡಿಗಳಿಂದ ಫಾಸ್ಫೇಟನ್ನು ಒದಗಿಸಬಹುದು. ಈ ಗೊಬ್ಬರಗಳನ್ನು ಹಸುರು ಗೊಬ್ಬರದ ಬೆಳೆಗಳಿಗೆ ಹಾಕಿ ಆ ಬೆಳೆಯನ್ನು ಬತ್ತದ ಗದ್ದೆಗೆ ಮುಗ್ಗು ಹೊಡೆಯುವುದರಿಂದ ಲಾಭವಿದೆಯೆನ್ನಲಾಗಿದೆ. ಪೊಟ್ಯಾಶ್ ಗೊಬ್ಬರದ ಕೊರತೆ ಇಷ್ಟು ಆಗತ್ಯವಿಲ್ಲ. ಅಧಿಕೋತ್ಪಾದನೆಯನ್ನು ಕೊಡುವ ತಳಿಗಳನ್ನು ಬೆಳೆಯುವುದರಿಂದ ಕ್ರಮೇಣ ಆ ಭೂಮಿಯಲ್ಲಿ ಪೊಟ್ಯಾಶಿನ ಕೊರತೆ ಉದ್ಭವಿಸುವುದು ಸಹಜ. ಅದಕಾರಣ ಅವಶ್ಯಕತೆ ಉಂಟಾದಾಗ ಮಾತ್ರ ಈ ಗೊಬ್ಬರವನ್ನು ಕೊಡುವ ರೂಢಿಯಿದೆ.

	ಬತ್ತಕ್ಕೆ ತಗಲುವ ರೋಗಗಳಲ್ಲಿ ಬೂಷ್ಟು ರೋಗಗಳೇ ಅಧಿಕವಿದ್ದು ಬೆಳೆಗೆ ಭಾರಿ ಪ್ರಮಾಣದ ನಷ್ಟ ತಂದೊಡ್ಡುತ್ತವೆ. ಇವುಗಳ ಪೈಕಿ ಬೆಂಕಿ ರೋಗ (ಬ್ಲಾಸ್ಟ್) ಹಾಗೂ ಕಂದು ಚುಕ್ಕೆ ರೋಗ ಮುಖ್ಯವಾದವು.

	ಬೆಂಕಿ ರೋಗಕ್ಕೆ ಪೈರಿಕ್ಯುಲೇರಿಯ ಒರೈಜೆ ಎಂಬ ಶಿಲೀಂಧ್ರ ಕಾರಣ. ಇದು ಬೆಳೆಯ ಎಲ್ಲ ಹಂತಗಳಲ್ಲಿ ಆವರಿಸಿ ಬೆಳೆವಣಿಗೆಯನ್ನು ಕುಗ್ಗಿಸುತ್ತದೆ. ತೆನೆಯ ಕೆಳಗಡೆ ಕುತ್ತಿಗೆಯ ಭಾಗಕ್ಕೆ ಆವರಿಸಿದರೆ ಕಾಳುತುಂಬದೆ ಬಟ್ಟಾಗಿ ಉಳಿದು ಅಪಕ್ವ ಸ್ಥಿತಿಯಲ್ಲಿಯೇ ಅದು ಮುರಿದು ಬೀಳುವುದು. 240 - 270 ಛಿ. ಉಷ್ಣತೆ ಹಾಗೂ 90% ರಷ್ಟು ಆದ್ರ್ರತೆ ಇದ್ದಲ್ಲಿ ಈ ರೋಗ ಭರದಿಂದ ಹರಡುತ್ತದೆ. ಬೋರ್ಡೊ ಮಿಶ್ರಣ ಅಥವಾ ತಾಮ್ರದ ಉಪ್ಪುಗಳಿಂದ ತಯಾರಿಸಿದ ರಾಸಾಯನಿಕಗಳಿಂದ ಈ ರೋಗವನ್ನು ಕೆಲಮಟ್ಟಿಗೆ ತಡೆ ಹಿಡಿಯಬಹುದಾದರೂ ರೋಗ ನಿರೋಧಕ ಜಾತಿಗಳನ್ನು ಬೆಳೆಸುವುದೇ ಅಧಿಕ ಲಾಭದಾಯಕ ಮಾರ್ಗ. ಅಔ-25, ಅಔ-29, ಅಔ-30, ಮುಗದ 249, ಊಙ-26-10 ಮೊದಲಾದ ತಳಿಗಳಿಗೆ ಈ ರೋಗ ತಗಲುವುದಿಲ್ಲ. ಕಂದು ಚುಕ್ಕೆ ರೋಗ ಹೆಲ್ಮಿಂತೊ ಸ್ಟೋರಿಯಮ್ ಎಂಬ ಬೂಷ್ಟಿನಿಂದ ಉಂಟಾಗುತ್ತದೆ. ರೋಗ ನಿರೋಧಕ ಜಾತಿಗಳನ್ನು ಬೆಳೆಸುವುದೊಂದೇ ಈ ರೋಗ ನಿವಾರಣೆಯ ಉಪಾಯ.

	ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಕೊಡುವುದರಿಂದ ದೇಟುಕೊಳೆಯೆಂಬ ರೋಗ ತಗಲುತ್ತದೆ. ಬೆಳೆ ಮಾಗುವ ಪೂರ್ವದಲ್ಲಿ ನೀರನ್ನು ಗದ್ದೆಗಳಿಂದ ತೆಗೆಯುವುದರಿಂದ ಹಾಗೂ ತೋಲಗಳನ್ನು ಸುಡುವುದರಿಂದ ಈ ರೋಗದಿಂದಾಗಬಹುದಾದ ಹಾನಿಯನ್ನು ನಿವಾರಿಸಬಹುದು.

	ಕೀಟಗಳಲ್ಲಿ ಬತ್ತದ ಕಾಂಡ ಕೊರೆಯುವ ಹುಳು ಬಲು ದೊಡ್ಡ ಪ್ರಮಾಣದಲ್ಲಿ ಬೆಳೆಯನ್ನು ಹಾನಿಗೀಡುಮಾಡುತ್ತದೆ. ಇದು ಕಾಂಡವನ್ನು ಕೊರೆಯುವುದರಿಂದ ಬೆಳೆಯುವ ಕುಡಿ ಕಮರಿ ಹೋಗಿ ತೆನೆ ಕಟ್ಟುವುದಿಲ್ಲ. ಸಸ್ಯಗಳ ಜೀವಮಾನದುದ್ದಕ್ಕೂ ಈ ಕೀಟ ತಗಲುವುದರಿಂದ ಇದನ್ನು ತಪ್ಪಿಸುವುದು ಪ್ರಯಾಸದ ಕೆಲಸ ಪ್ಯಾರಥಿಯಾನ್, ಎಂಡ್ರಿನ್, ಬಿಎಚ್‍ಸಿ, ಫಾಲಿಡಾಲುಗಳನ್ನು ಉಪಯೋಗಿಸಿ ಈ ಕೀಟವನ್ನು ನಿಯಂತ್ರಿಸಬಹುದಾದರೂ ಸಂಪೂರ್ಣ ಹತೋಟಿ ಅಸಾಧ್ಯ. ಕೀಟ ನಿರೋಧಕ ಜಾತಿಗಳನ್ನು ಬೆಳೆಸುವುದೇ ಉತ್ತಮ ಮಾರ್ಗ.

	ಬತ್ತದ ತಿಗಣೆಗಳು ಕಾಳುಗಳ ಹಾಲನ್ನು ಹೀರುವುದರ ಮೂಲಕ ಹಾನಿ ಉಂಟುಮಾಡುತ್ತವೆ. ಚಿಟ್ಟೆಗಳು ಎಲೆಗಳನ್ನೂ ಕುಡಿಗಳನ್ನೂ ತಿನ್ನುವುದರಿಂದ ಬೆಳೆಯನ್ನು ಕುಗ್ಗಿಸುತ್ತವೆ. ಈ ಎರಡೂ ಕೀಟಗಳನ್ನು ಬಿಎಚ್‍ಸಿ ಅಥವಾ ಡಿಡಿಟಿ ಕೀಟನಾಶಕಗಳಿಂದ ನಿಯಂತ್ರಿಸಬಹುದು.

	ಕೊಯ್ಲಿಗೆ 15-20 ದಿವಸ ಮುಂಚಿತವಾಗಿ ಗದ್ದೆಯಿಂದ ನೀರನ್ನು ತೆಗೆಯುವುದರಿಂದ ಕಾಳುಗಳು ಒಂದೇ ಸಮವಾಗಿ ಮಾಗುತ್ತವೆ. ಕಾಳಿನಲ್ಲಿಯ ಅರ್ದತೆ ಅತಿಕಡಿಮೆ ಪ್ರಮಾಣದಲ್ಲಿ ಉಳಿಯುವಂತೆ ಮಾಡಿದರೆ (ಅಂದರೆ 10-%12%) ಉತ್ತಮ ದರ್ಜೆಯ ಅಕ್ಕಿ ಪಡೆಯಬಹುದು.

	ಬತ್ತವನ್ನು ಕೊಯ್ದನಂತರ ಕೂಳೆ ಬೆಳೆಯನ್ನು ತೆಗೆದುಕೊಳ್ಳುವ ಪರಿಪಾಠ ಕೆಲ ಪ್ರದೇಶಗಳಲ್ಲಿ ಪ್ರಚಲಿತವಿದೆ. ಕೂಳೆ ಬೆಳೆಗಾಗಿಯೇ ಬೆಳೆಸುವ ಪ್ರತ್ಯೇಕ ತಳಿಗಳೂ ಉಂಟು. ಇವುಗಳಿಂದ ಸಾಕಷ್ಟು ಮೊತ್ತದ ಇಳುವರಿ ಸಿಗುವುದು.
ಬತ್ತದ ಸಿವುಡುಗಳನ್ನು ಮರದ ಹಲಗೆಯ ಮೇಲೆ ಬಡಿಯುವುದರಿಂದ ಅಥವಾ ಸಿವುಡುಗಳನ್ನು ದುಂಡಗೆ ಹರವಿ ಎತ್ತುಗಳನ್ನು ಹೂಡಿ (ಹಂತಿಕಟ್ಟಿ) ತುಳಿಸುವುದುರಿಂದ ಕಾಳು ಬೇರಾಗುವುವು. ಗಾಳಿಯಲ್ಲಿ ತೂರಿ ಕಾಳನ್ನು ಹಸನುಮಾಡಲಾಗುತ್ತದೆ.

	ಇಳುವರಿಯಲ್ಲಿ ಮಹದಂತವಿದೆ. ಸ್ಪೇನಿನಲ್ಲಿ ಪ್ರತಿ ಹೆಕ್ಟೇರಿಗೆ ಸರಾಸರಿ 3,900 ಕೆಜಿ ಅಕ್ಕಿ ದೊರೆಯುವುದಾದರೆ ಭಾರತದಲ್ಲಿ ಸರಾಸರಿ ಕೇವಲ 900 ಕೆಜಿ ಇದೆ. ತಮಿಳುನಾಡಿನಲ್ಲಿ ಪ್ರತಿ ಹೆಕ್ಟೇರಿಗೆ (ಅಕ್ಕಿಯ ರೂಪದಲ್ಲಿ) 1495 ಕೆಜಿ. ಕೇರಳದಲ್ಲಿ 1,500 ಕೆಜಿ. ಕರ್ನಾಟಕದಲ್ಲಿ 1,399 ಕೆಜಿ ಇದ್ದು ಇತರ ರಾಜ್ಯಗಳಲ್ಲಿ ಇಳುವರಿ ಇನ್ನೂ ಕಡಿಮೆ ಇದೆ. ಮಧ್ಯಪ್ರದೇಶ ಹಾಗೂ ಅಸ್ಸಾಮ್‍ಗಳಲ್ಲಿ ಅನುಕ್ರಮವಾಗಿ 584 ಹಾಗೂ 570 ಕೆಜಿ ಇಳುವರಿ ಇದೆ.

	ಬತ್ತವನ್ನು ಪಣತ ಹಾಗೂ ಕಣಜಗಳಲ್ಲಿ ಸಂಗ್ರಹಿಸಿಡುವ ಪರಿಪಾಠ ಉಂಟು. ದೊಡ್ಡ ದೊಡ್ಡ ಸಂಗ್ರಹಾಗಾರಗಳಲ್ಲಿ ಗೋಣಿಚೀಲಗಳಲ್ಲಿಡುತ್ತಾರೆ. ಬತ್ತದ ಹುಲ್ಲಿನಿಂದ ಹೆಣೆದ ಗೂಡೆಗಳಲ್ಲಿಯೂ ಸಂಗ್ರಹಿಸುವುದುಂಟು.

	ಬತ್ತವನ್ನು ಗಿರುಣಿಗಳಲ್ಲಿ ಒಡೆದು ಅಕ್ಕಿ ಮಾಡುವ ವಿಧಾನವೇ ಸಾರ್ವತ್ರಿಕ ರೂಢಿಯಾಗಿದೆ. ಒಡೆಯುವ ಮುನ್ನ ನೀರನಲ್ಲಿ ನೆನೆಯಿಟ್ಟು ಅನಂತರ ಕುದಿಸಿ ಒಣಗಿಸಿ ಮುಂದೆ ಮಿಲ್ಲು ಮಾಡುವ ಪದ್ಧತಿ ಭಾರತದ ಸುಮಾರು ಅರ್ಧಭಾಗದಲ್ಲಿ ಪ್ರಚಲಿತವಿದೆ. ಇಂಥ ಅಕ್ಕಿಗೆ ಕುಸುಬಲು ಅಥವಾ ಕುಚುಗಲಕ್ಕಿ ಎಂದು ಹೆಸರು. ಇದರಿಂದ ಬತ್ತವನ್ನು ಸುಲಭವಾಗಿ ಒಡೆಯಬಹುದು. ನುಚ್ಚಿನ ಪ್ರಮಾಣ ಕಡಿಮೆ ಆಗುತ್ತದೆ. ಅಕ್ಕಿಗೆ ರೋಗ ಹಾಗೂ ಹುಳುಗಳ ಕಾಟ ಕಡಿಮೆ. ಬೆಳ್ತಗೆ ಅಥವಾ ಬೆಣತ ಅಕ್ಕಿಗಿಂತ ಕುಚುಗಲಕ್ಕಿ ಹೆಚ್ಚು ಸತ್ತ್ವಯುತ.

	ಪ್ರಪಂಚದ ಮೂರರಲ್ಲೊಂದು ಪಾಲು ಜನಕ್ಕೆ ಅಕ್ಕಿ ಮುಖ್ಯ ಆಹಾರ. ಇದರಿಂದ ಅನ್ನ ತಯಾರಿಸಿ ಬೇಳೆಯಸಾರು, ತರಕಾರಿ, ಮೀನು ಅಥವಾ ಮಾಂಸದ ಜೊತೆಗೆ ಉಣ್ಣುವರು. ಮಸಾಲೆ ಹಾಕಿ ಬಿರಿಯಾನಿ ಮಾಡುವರು. ಅಕ್ಕಿಯಿಂದ ಅವಲಕ್ಕಿ, ಮಂಡಕ್ಕಿ, (ಪುರಿ), ಬತ್ತದ ಅರಳು ಮೊದಲಾದ ತಿನಸುಗಳನ್ನು ತಯಾರಿಸುವರು ಅಕ್ಕಿಯ ದೋಸೆ, ಇಡ್ಲಿ, ಉತ್ತಪ್ಪ, ತಾಲೀಪಿಟ್ಟುಗಳು ಜನಾನುರಾಗ ಪಡೆದಿವೆ ತರತರದ ಹಪ್ಪಳ, ಸಂಡಿಗೆಗಳು ಆಹಾರದ ಮುಖ್ಯ ಪರಿಕರಗಳೆನಿಸಿವೆ. ಅಕ್ಕಿಯಿಂದ ಮದ್ಯ ತಯಾರಿಸುತ್ತಾರೆ. ಜಪಾನಿನಲ್ಲಿ ಇದಕ್ಕೆ ಸಾಕೆ ಎಂದು ಹೆಸರು. ಅಕ್ಕಿಯ ನುಚ್ಚನ್ನು ದನಗಳಿಗೆ ಹಾಕುವ ಪರಿಪಾಠವಿದೆ. ಬತ್ತದ ಗೊಳಲನ್ನು ಉರುವಲಾಗಿ ಬಳಸುವುದಲ್ಲದೆ ಮನೆ ಕಟ್ಟುವಾಗ, ರಟ್ಟುಗಳನ್ನು ತಯಾರಿಸುವಾಗ ಕೂಡ ಉಪಯೋಗಿಸುವುದುಂಟು. ಅಕ್ಕಿಯ ತವಡು ಹಿಂಡುವ ದನಗಳಿಗೆ ಅತ್ಯಾವಶ್ಯಕ. ಬತ್ತದ ಹುಲ್ಲು ದನಗಳಿಗೆ ಒಳ್ಳೆಯ ಮೇವು.
(ಸಿ.ವಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ